ನಾಗತಿಹಳ್ಳಿ ಚಂದ್ರಶೇಖರ
 	1958. ಚಲನಚಿತ್ರ ನಿರ್ದೇಶಕ, ಲೇಖಕ, ಹಾಗೂ ಪರಿಸರವಾದಿ. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ನಾಗತಿಹಳ್ಳಿ ಗ್ರಾಮದಲ್ಲಿ 1958 ಆಗಸ್ಟ್ 15ರಂದು ಜನಿಸಿದರು. ತಂದೆ ತಿಮ್ಮಶೆಟ್ಟಿಗೌಡ, ತಾಯಿ ಪಾರ್ವತಮ್ಮ. ಬಾಲ್ಯದಿಂದಲೇ ಸಾಹಿತ್ಯಾಸಕ್ತಿ ಹೊಂದಿದ್ದ ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಹತ್ತು ಚಿನ್ನದ ಪದಕಗಳನ್ನು ಪಡೆಯುವುದರೊಂದಿಗೆ ಪೂರೈಸಿದರು (1985). ಗ್ರಾಮೀಣ ಪ್ರದೇಶದಿಂದ ಬಂದ ಇವರು ವಿದ್ಯಾರ್ಥಿ ಜೀವನದಲ್ಲಿ ಮೈಲಿಗಲ್ಲುಗಳಿಗೆ ಬಣ್ಣ ಬಳಿಯುವುದು, ರಾಜ್ಯ ಹಾಲು ಒಕ್ಕೂಟದಲ್ಲಿ ದಿನಗೂಲಿಯ ನೌಕರಿ ಮಾಡುವುದು ಮೊದಲಾದ ಕೆಲಸಗಳ ಮೂಲಕ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದರು.

	ಇವರು ಹದ್ದುಗಳು, ನನ್ನ ಪ್ರೀತಿಯ ಹುಡುಗನಿಗೆ, ಮಲೆನಾಡಿನ ಹುಡುಗಿ ಬಯಲು ಸೀಮೆಯ ಹುಡುಗ, ಸನ್ನಿದಿs, ಅಕಾಲ ಮೊದಲಾದ ಆರು ಕಥಾಸಂಕಲನಗಳನ್ನೂ ಎರಡು ಪ್ರವಾಸ ಕಥನಗಳನ್ನೂ ಮೂರು ಕಾದಂಬರಿಗಳನ್ನೂ ರಚಿಸಿದ್ದಾರೆ.

	ಕಾಡಿನಬೆಂಕಿ ಚಲನಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಮತ್ತು ಗೀತರಚನೆ ಮಾಡುವುದರ ಮೂಲಕ ಚಿತ್ರರಂಗ ಪ್ರವೇಶಿಸಿದರು (1987). ಸಂಕ್ರಾಂತಿ ಚಲನಚಿತ್ರದ ಮೂಲಕ ಕಥೆಗಾರರಾದರು (1988). ಉಂಡೂ ಹೋದ ಕೊಂಡೂಹೋದ ಎಂಬ ಚಿತ್ರ ನಿರ್ದೇಶಿಸಿ (1992) ಯಶಸ್ವಿ ಚಿತ್ರ ನಿರ್ದೇಶಕರೆನಿಸಿದರು. ಕೋಟ್ರೇಶಿ ಕನಸು, ಬಾ ನಲ್ಲೆ ಮಧುಚಂದ್ರಕ್ಕೆ, ಅಮೆರಿಕಾ ಅಮೆರಿಕಾ, ಹೂಮಳೆ, ನನ್ನ ಪ್ರೀತಿಯ ಹುಡುಗಿ, ಪ್ಯಾರಿಸ್ ಪ್ರಣಯ ಮುಂತಾದ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಪ್ರತಿಬಿಂಬ, ವಠಾರ ಈ ಧಾರವಾಹಿಗಳ ಮೂಲಕ ಕಿರುತೆರೆಯಲ್ಲಿಯೂ ಇವರು ಅಪಾರ ಯಶÀಸ್ಸು ಗಳಿಸಿದರು.
	ಅಮೆರಿಕಾ ಮತ್ತು ಯೂರೋಪ್ ರಾಷ್ಟ್ರಗಳಲ್ಲಿ ವ್ಯಾಪಕ ಪ್ರವಾಸ ಮಾಡಿರುವ ಇವರು ಅಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ. ಕನ್ನಡ ಚಿತ್ರವನ್ನು ಅಮೆರಿಕದ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿದ ಕೀರ್ತಿ ಇವರದು.

ಇವರು ನಿರ್ದೇಶಿಸಿರುವ ಸಂಕ್ರಾಂತಿ ಚಿತ್ರಕ್ಕೆ ಅತ್ಯುತ್ತಮ ಕಥಾಲೇಖನ ರಾಜ್ಯ ಪ್ರಶಸ್ತಿ (1988-89) ಉಂಡೂಹೋದ ಕೊಂಡೂಹೋದ ಚಿತ್ರಕ್ಕೆ ಅತ್ಯುತ್ತಮ ಕಥಾಲೇಖಕ ಪ್ರಶಸ್ತಿ (1992), ಕೊಟ್ರೇಶಿ ಕನಸು ಚಿತ್ರಕ್ಕೆ ಅತ್ಯುತ್ತಮ ಸಾಮಾಜಿಕ ಪರಿಣಾಮ ಬೀರುವ ಚಿತ್ರವೆಂದು ರಾಜ್ಯ ಪ್ರಶಸ್ತಿ (1993-94), ನಿರ್ದೇಶಕರ ಸಂಘದ ಪ್ರಶಸ್ತಿ, ಸನ್ಮಾನ ಹಾಗೂ ಇದೇ ಚಿತ್ರಕ್ಕೆ 1994ರ ಅತ್ಯುತ್ತಮ ಪ್ರಾದೇಶಿಕ ಚಿತ್ರವೆಂದು ರಾಷ್ಟ್ರ ಪ್ರಶಸ್ತಿ ಲಬಿsಸಿದೆ. ಅಮೆರಿಕಾ ಅಮೆರಿಕಾ ಚಿತ್ರ ಅತ್ಯುತ್ತಮ ಚಿತ್ರವೆಂದು ರಾಜ್ಯ ಪ್ರಶಸ್ತಿ ಹಾಗೂ ಅತ್ಯುತ್ತಮ ಕಥಾ ಪ್ರಶಸ್ತಿ ಪಡೆದುಕೊಂಡಿದೆ (1996-97). ವಿಬಿsನ್ನ ಕಥಾಹಂದರದ ಹೂಮಳೆ ದ್ವಿತೀಯ ಅತ್ಯುತ್ತಮ ಚಿತ್ರಪ್ರಶಸ್ತಿ ಗಳಿಸಿದರೆ (1998-99) ನನ್ನ ಪ್ರೀತಿಯ ಹುಡುಗಿ 2001ರ ಅತ್ಯಂತ ಯಶಸ್ವೀ ಚಿತ್ರವೆಂದು ಪ್ರಶಸ್ತಿ ಪಡೆದಿದೆ.	
 (ಎಸ್.ಯು.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ